ಅಭಿಪ್ರಾಯ / ಸಲಹೆಗಳು

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

 

 

ಪ್ರಾಸ್ತಾವಿಕ:

ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಹೂಡುತ್ತಿರುವ ಬಂಡವಾಳವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ 2ನೇ ಅಕ್ಟೋಬರ್ 1975 ರಂದು ಮೈಸೂರು ಜಿಲ್ಲೆಯ, ಟಿ. ನರಸೀಪುರ ತಾಲ್ಲೂಕಿನಲ್ಲಿ 100 ಅಂಗನವಾಡಿ ಕೇಂದ್ರಗಳೊಂದಿಗೆ ಪ್ರಾರಂಭಿಸಲಾಯಿತು. ಈಗ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷ ಒಳಗಿನ ಮಕ್ಕಳ ಕಲ್ಯಾಣವು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ.

 
 
 
ಯೋಜನೆಯ ಉದ್ದೇಶ
 • 0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟವನ್ನು ವೃದ್ಧಿಸುವುದು.

 • ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು.

 • ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು.

 • ಶಿಶು ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸುವ ಕಾರ್ಯನೀತಿ ಮತ್ತು ಅನುಷ್ಠಾನಗೊಳಿಸುವ ದಿಸೆಯಲ್ಲಿ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು.

 • ಆರೋಗ್ಯ ಮತ್ತು ಪೌಷ್ಠಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುವುದು

ಐ.ಸಿ.ಡಿ.ಎಸ್ ಸೇವಾ ಸೌಲಭ್ಯಗಳು:

 

 

ಸೇವೆಗಳು

ಫಲಾನುಭವಿಗಳು

ಯಾರ ಮುಖಾಂತರ ಅಂಗನವಾಡಿಗಳಲ್ಲಿ ಸೇವೆ ಲಭ್ಯವಾಗಿದೆ

ಪೂರಕ ಪೌಷ್ಠಿಕ ಆಹಾರ

6 ವರ್ಷ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿ, ಕಿಶೋರಿಯರು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು

ಚುಚ್ಚುಮದ್ದು

6 ವರ್ಷದ ಒಳಗಿನ ಮಕ್ಕಳು; ಗರ್ಭಿಣಿಯರು

ಕಿರಿಯ ಆರೋಗ್ಯ ಸಹಾಯಕಿ

ಆರೋಗ್ಯ ತಪಾಸಣೆ

6 ವರ್ಷದ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿಯರು

ವೈದ್ಯಾಧಿಕಾರಿಗಳು/ ಕಿರಿಯ ಆರೋಗ್ಯ ಸಹಾಯಕಿ/ ಅಂಗನವಾಡಿ ಕಾರ್ಯಕರ್ತೆ

ಮಾಹಿತಿ ಸೇವೆ

6 ವರ್ಷದ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿ, ಕಿಶೋರಿಯರು

ವೈದ್ಯಾಧಿಕಾರಿಗಳು/ ಕಿರಿಯ ಆರೋಗ್ಯ ಸಹಾಯಕಿ/ ಅಂಗನವಾಡಿ ಕಾರ್ಯಕರ್ತೆ

ಶಾಲಾಪೂರ್ವ ಶಿಕ್ಷಣ

3-6 ವರ್ಷದ ಮಕ್ಕಳು

ಅಂಗನವಾಡಿ ಕಾರ್ಯಕರ್ತೆ

ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ

15-45 ವಯಸ್ಸಿನ ಮಹಿಳೆಯರು, ಕಿಶೋರಿಯರು

ಅಂಗನವಾಡಿ ಕಾರ್ಯಕರ್ತೆ/ ಕಿರಿಯ ಆರೋಗ್ಯ ಸಹಾಯಕಿ/ ಎ.ಎನ್.ಎಂ / ಆಹಾರ ಮತ್ತು ಪೌಷ್ಠಿಕತೆ ಮಂಡಳಿಯ ಸಿಬ್ಬಂದಿ

ಐಸಿಡಿಎಸ್ Mission, ಅಡಿ ಸೇವೆಗಳನ್ನು ಪುನರ್ ರಚಿಸಲಾಗಿದೆ

ಪ್ರಾರಂಭಿಕ ಬಾಲ್ಯಾವಸ್ಥೆ ಆರೈಕೆ ಶಿಕ್ಷಣ ಹಾಗೂ ಅಭಿವೃದ್ದಿ (ECCED)

ಪ್ರಾರಂಭಿಕ ಬಾಲ್ಯಾವಸ್ಥೆ ಆರೈಕೆ ಶಿಕ್ಷಣ ಹಾಗೂ ಅಭಿವೃದ್ದಿ (ECCE)/ ಶಾಲಾಪೂರ್ವ ಶಿಕ್ಷಣ ಅನೌಪಚಾರಿಕ ಶಿಕ್ಷಣ

0-3 ವರ್ಷ ಮಕ್ಕಳ ಪೋಷಕರು/ ಪಾಲಕರು

ಪೂರಕ ಪೌಷ್ಠಿಕ ಆಹಾರ

6 ವರ್ಷ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿ, ಕಿಶೋರಿಯರು

ಆರೈಕೆ ಹಾಗೂ ಪೌಷ್ಠಿಕತೆ ಬಗ್ಗೆ ಸಮಾಲೋಚನೆ

ಶಿಶು ಹಾಗೂ ಮಗುವಿನ ಉಣಿಸುವ ಬಗ್ಗೆ ಉತ್ತೇಜನೆ/ಸಮಾಲೋಚನೆ

ಗರ್ಭಿಣಿ, ಬಾಣಂತಿ, 3 ವರ್ಷದೊಳಗಿನ ಮಕ್ಕಳ ತಾಯಂದಿರು

ಆರೈಕೆ,ಪೌಷ್ಠಿಕತೆ, ಆರೋಗ್ಯ ಹಾಗೂ ನೈರ್ಮಲ್ಯ ಶಿಕ್ಷಣ

ತಾಯಂದಿರ ಆರೈಕೆ ಹಾಗೂ ಸಮಾಲೋಚನೆ

ಗರ್ಭಿಣಿ , ಬಾಣಂತಿ ಮಹಿಳೆ

ಸಮುದಾಯ ಆಧಾರಿತ ಅಪೌಷ್ಠಿಕ ಮಕ್ಕಳ ನಿರ್ವಹಣೆ ಹಾಗೂ ಆರೈಕೆ

ಸಾಧಾರಣ ಹಾಗೂ ಅಪೌಷ್ಠಿಕ ಮಕ್ಕಳು, ಪೋಷಕರು/ಪಾಲಕರು

ಆರೋಗ್ಯ ಸೇವೆ

ಚುಚ್ಚುಮದ್ದು ಹಾಗೂ ಪೂರಕ ಸೂಕ್ಷ್ಮ ಪೋಷಕಾಂಶ

6 ವರ್ಷ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿಯರು

ಮಾಹಿತಿ ಸೇವೆ

ಆರೋಗ್ಯ ತಪಾಸಣೆ

ಸಮುದಾಯ ಒಗ್ಗೂಡುವಿಕೆ, ಮಾಹಿತಿ ಶಿಕ್ಷಣ ಸಂವಹನೆ

ಮಾಹಿತಿ ಶಿಕ್ಷಣ ಸಂವಹನೆ, ಜಾಗೃತಿ/ಆಂದೋಲನಾ/ಜಾಥಾ

ಕುಟುಂಬ ಹಾಗೂ ಸಮುದಾಯ

 

ರಾಜ್ಯದ ಎಲ್ಲಾ 225 ತಾಲ್ಲೂಕುಗಳಲ್ಲೂ 204 ಶಿಶು ಅಭಿವೃದ್ಧಿ ಯೋಜನೆಗಳ ಮುಖಾಂತರ (181 ಗ್ರಾಮಾಂತರ, 12 ಗುಡ್ಡಗಾಡು ಯೋಜನೆ ಹಾಗು 11 ನಗರ ಪ್ರದೇಶದಲ್ಲಿ) ಒಟ್ಟು 62580 ಅಂಗನವಾಡಿ ಕೇಂದ್ರಗಳು ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2017-18 ನೇ ಸಾಲಿನಲ್ಲಿ 56.50 ಲಕ್ಷ ಫಲಾನುಭವಿಗಳಿಗೆ ಸೇವೆಗಳನ್ನು ಒದಗಿಸಲಾಗಿರುತ್ತದೆ.
ಅ. ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಸಮವಸ್ತ್ರ : ಕೇಂದ್ರ ಸರ್ಕಾರದ ಪತ್ರದ ಸಂ: 11-36/2016 ಸಿಡಿ-1 ದಿನಾಂಕ: 23-11-2017ರಂತೆ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ರೂ. 800/- ಮೊತ್ತದ ಒಂದು ವರ್ಷಕ್ಕೆ 2 ಸೀರೆಗಳ್ನು ಒದಗಿಸಬೇಕಾಗಿರುತ್ತದೆ.
ಆ. ಶಾಲಾ ಪೂರ್ವ ಶಿಕ್ಷಣ ಕಿಟ್ : ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಡಳಿತ ವೆಚ್ಚದಡಿ ಪ್ರತಿ ಅಂಗನವಾಡಿ ಕೇಂದ್ರ ಹಾಗು ಮಿನಿ ಅಂಗನವಾಡಿ ಕೇಂದ್ರಕ್ಕೆ ವಾರ್ಷಿಕ ರೂ 5000 ಗಳ ಅನುದಾನವನ್ನು ತರಬೇತಿ ಸೇರಿದಂತೆ ಶಾಲಾ ಪೂರ್ವ ಶಿಕ್ಷಣ ಕಿಟ್‍ಗಾಗಿ ನಿಗದಿಪಡಿಸಲಾಗಿದೆ. ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟ ಹಾಗೂ ಏಕ ರೂಪತೆ ತರುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ, ನುರಿತ ಶಿಕ್ಷಣ ತಜ್ಞರ ಹಾಗೂ ವಿವಿಧ ಆಯ್ದ ಐಸಿಡಿಎಸ್ ಕರ್ಮಚಾರಿಗಳ ಕಾರ್ಯಗಾರ ನಡೆಸಿ, ಮಾದರಿ ಕಿಟ್ ಅಭಿವೃದ್ಧಿ ಪಡಿಸಲಾಗಿದೆ.
ಇ. ಮೆಡಿಸಿನ್ ಕಿಟ್: ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಡಳಿತ ವೆಚ್ಚದಡಿ 62580 ಅಂ.ಕೇಂದ್ರಗಳಿಗೆ ಹಾಗೂ 3331 ಮಿನಿ ಅಂ.ಕೇಂದ್ರಗಳಿಗೆ ಪ್ರತಿ ಅಂ.ಕೇಂದ್ರಕ್ಕೆ ರೂ 1500/- ರಂತೆ ಹಾಗೂ ಪ್ರತಿ ಮಿನಿ ಅಂ.ಕೇಂದ್ರಕ್ಕೆ ರೂ 750/- ರಂತೆ ಮೆಡಿಸಿನ್ ಕಿಟ್‍ಗಳನ್ನು ಒದಗಿಸಲಾಗುತ್ತಿದೆ.

ಪೂರಕ ಪೌಷ್ಠಿಕ ಆಹಾರ:

 ಪೂರಕ ಪೌಷ್ಠಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ವೆಚ್ಚ ಮಾಡುವ ಮೊತ್ತದ ಶೇ 50% ಕೇಂದ್ರ ಸರ್ಕಾರವು ಮರುಪಾವತಿಸುತ್ತದೆ. ಫಲಾನುಭವಿಗಳು ಪ್ರತಿ ದಿನ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಪೂರಕವಾಗಿ ಪರಿಷ್ಕೃತ ಮಾರ್ಗಸೂಚಿಯಂತೆ 6 ತಿಂಗಳಿಂದ - 6 ವರ್ಷದ ಮಕ್ಕಳಿಗೆ 500 ಕ್ಯಾಲೊರಿಗಳನ್ನು, 12-15 ಗ್ರಾಂ ಪ್ರೋಟಿನ್, ಗರ್ಭಿಣಿ/ ಬಾಣಂತಿ/ಪ್ರಾಯಪೂರ್ವ ಬಾಲಕಿಯರಿಗೆ 600 ಕ್ಯಾಲೊರಿಗಳನ್ನು ಮತ್ತು 18-20 ಗ್ರಾಂ ಪ್ರೋಟಿನ್ ಅಲ್ಲದೆ ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿಗಳನ್ನು ಮತ್ತು 20-25 ಗ್ರಾಂ ಪ್ರೋಟಿನ್ ನೀಡುವ ಉದ್ದೇಶದಿಂದ ಯೋಜನೆಯಡಿ ಪೂರಕ ಪೌಷ್ಠಿಕ ಅಹಾರ ನೀಡಲಾಗುತ್ತಿದೆ. ಯೋಜನೆಯ ಮಾರ್ಗಸೂಚಿಯಂತೆ ವರ್ಷದಲ್ಲಿ 300 ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.
     ಕೇಂದ್ರ ಸರ್ಕಾರದ ದಿನಾಂಕ: 23-11-2017 ರ ಮಾರ್ಗಸೂಚಿಯಲ್ಲಿ ಸಾಮಾನ್ಯ ಮಕ್ಕಳಿಗೆ ಪ್ರತಿ ದಿನ ರೂ. 8.00 /-ರಂತೆ , ಗರ್ಭಿಣಿ/ಬಾಣಂತಿ/ಪ್ರಾಯಪೂರ್ವ ಬಾಲಕಿಯರಿಗೆ ಘಟಕ ವೆಚ್ಚ ರೂ. 9.50/-ರಂತೆ ಮತ್ತು ತೀವ್ರ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ರೂ.12.00 /-ರ ಘಟಕ ವೆಚ್ಚವನ್ನು ಪರಿಷ್ಕರಿಸಲಾಗಿದೆ. ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ಇಲಾಖೆಯ ಸಹಾಯದೊಂದಿಗೆ ಕಾರ್ಯನಿರತವಾಗಿದ್ದು, ಇದರಲ್ಲಿ 22-32 ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು ವಿಧವೆಯರು, ವಿಕಲಚೇತನರು, ಪರಿತ್ಯಕ್ತ ಮಹಿಳೆಯರು, ಫಲಾನುಭವಿಗಳ ತಾಯಂದಿರು, ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಆಗಿರುತ್ತಾರೆ. ಈ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ತಿನ್ನಲು ಸಿದ್ಧಪಡಿಸಿದ ಆಹಾರ/ಬೇಯಿಸಲು ಸಿದ್ಧವಿರುವ ಆಹಾರ ಪದಾರ್ಥಗಳನ್ನು ವಾರದ 6 ದಿನಗಳು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರತ MSPTC ಮಹಿಳಾ ಪೂರಕ ಪೌಷ್ಠಿಕ ಕೇಂದ್ರಗಳ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಮೆನು ನಿಗದಿಪಡಿಸಲಾಗುವುದು, ಉದಾ:

 • 6ತಿ - 3 ವರ್ಷ - ಗೋಧಿ ರವೆ, ಅಕ್ಕಿ, ಹೆಸರುಕಾಳು, ನ್ಯೂಟ್ರಿಮಿಕ್ಸ್ ಪುಡಿ

 • 3-6 ವರ್ಷ - ಚಿತ್ರನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಅನ್ನ ಸಾಂಬರ್

 • ಪ್ರಾಯಪೂರ್ವ ಬಾಲಕಿಯರ - ಅಕ್ಕಿ, ಹೆಸರುಕಾಳು, ಗೋಧಿ

 • ಕ್ಷೀರ ಭಾಗ್ಯ ಯೋಜನೆಯಡಿ 6 ತಿ – 6 ವರ್ಷದ ಮಕ್ಕಳಿಗೆ ವಾರದಲ್ಲಿ 5 ದಿನ 150 ಮಿ.ಲಿ ಹಾಲು ನೀಡಲಾಗುತ್ತಿದೆ (15ಗ್ರಾಂ ಹಾಲಿನಪುಡಿ , 10 ಗ್ರಾಂ ಸಕ್ಕರೆ)

 • 3-6 ವರ್ಷದ ಎಲ್ಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ.

 • 06 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ, 3-6 ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ವಾರದ 6 ದಿನ ಹಾಲು ನೀಡಲಾಗುತ್ತಿದೆ.

 • 5 ಹಿಂದುಳಿದ ಜಿಲ್ಲೆಗಳಾದ ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ 6 ತಿಂಗಳಿಂದ - 3 ವರ್ಷದ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3-6 ವರ್ಷದ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ, ಮೊಟ್ಟೆ ತಿನ್ನದ ಮಕ್ಕಳಿಗೆ ವಾರದ 6 ದಿನ ಹಾಲು ನೀಡಲಾಗುತ್ತಿದೆ.

ಸಮಗ್ರ ಶಿಶು ಆಭಿವೃದ್ಧಿ ಯೋಜನೆಯ ತರಬೇತಿ ಕಾರ್ಯಕ್ರಮ:

 • ತರಬೇತಿ ಕಾರ್ಯಕ್ರಮವು ಐಸಿಡಿಎಸ್‍ನ ಎಲ್ಲಾ ಹಂತದ ಕರ್ಮಚಾರಿಗಳ ಕಾರ್ಯ ನಿರ್ವಹಣೆಗೆ ಅವಿಭಾಜ್ಯ ಅಂಗವಾಗಿರುತ್ತದೆ.

 • ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನಿಪ್ಸಿಡ್, ದಕ್ಷಿಣ ಪ್ರಾದೇಶಿಕ ಸಂಸ್ಥೆ, ಬೆಂಗಳೂರು ಇಲ್ಲಿ ಕೆಲಸಕ್ಕೆ ಸ್ಭೆರಿದ ನಚಿತರ 32 ದಿನಗಳ ವೃತ್ತಿ ತರಬೇತಿ ಹಾಗೂ 7 ಪುನಶ್ಚೇತನ ತರಬೇತಿಯನ್ನು 2 ವರ್ಷಕೊಮ್ಮೆ ನೀಡಲಾಗುತ್ತಿದೆ.

 • ಮೇಲ್ವಿಚಾರಕಿಯರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಮಧ್ಯಮಸ್ತರ ತರಬೇತಿ ಕೇಂದ್ರದಲ್ಲಿ ವೃತ್ತಿ/ಪುನ:ಶ್ಚೇತನ ತರಬೇತಿಯನ್ನು ನೀಡಲಾಗುತ್ತಿದೆ.

 • ಪ್ರಥಮವಾಗಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರಿಗೆ 32 ದಿನಗಳ ವೃತ್ತಿ ತರಬೇತಿಯನ್ನು ರಾಜ್ಯದಲ್ಲಿರುವ 21 ಅಂಗನವಾಡಿ ತರಬೇತಿ ಕೇಂದ್ರಗಳ ಮೂಲಕ ನೀಡಿ ನಂತರ ಪುನಶ್ಚೇತನ ತರಬೇತಿಯನ್ನು 2 ವರ್ಷಕೊಮ್ಮೆ ನೀಡಲಾಗುತ್ತಿದೆ.

 • ಅಂಗನವಾಡಿ ಸಹಾಯಕಿಯರಿಗೆ 8 ದಿನಗಳ ಓರಿಯಂಟೇಷನ್ ಹಾಗೂ 5 ದಿನಗಳ ಪುನ:ಶ್ಚೇತನ ತರಬೇತಿಯನ್ನು ಸಹ ಈ ತರಬೇತಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.

ಅಂಗನವಾಡಿ ಕಟ್ಟಡಗಳ ನಿರ್ಮಾಣ:

 

   ಸಮಗ್ರ ಶಿಶು ಅಭಿವೃದ್ದಿ ಯೋಜನೆ ಯಡಿಯಲ್ಲಿ ಬರುವ ಫಲಾನುಭವಿಗಳಿಗೆ ಯೋಜನೆಯ ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲು ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸ್ವಂತ ಕಟ್ಟಡವಿರುವುದು ಅವಶ್ಯವಾಗಿರುತ್ತದೆ.
     ಪ್ರಸ್ತುತ 63030 ಅಂಗನವಾಡಿ ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳ ಪೈಕಿ 41508 ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿದ್ದು, 1527 ಅಂಗನವಾಡಿ ಕೇಂದ್ರಗಳು ಪಂಚಾಯತ್ ಕಟ್ಟಡಗಳಲ್ಲಿ, 3537 ಅಂಗನವಾಡಿ ಕೇಂದ್ರಗಳು ಸಮುದಾಯದ ಕಟ್ಟಡಗಳಲ್ಲಿ, 152 ಅಂಗನವಾಡಿ ಕೇಂದ್ರಗಳು ಯುವಕ ಮಂಡಳಿ ಮತ್ತು 94 ಮಹಿಳಾ ಮಂಡಳಿ ಕಟ್ಟಡಗಳಲ್ಲಿ, 4266 ಅಂಗನವಾಡಿ ಕೇಂದ್ರಗಳು ಶಾಲಾ ಕಟ್ಟಡಗಳಲ್ಲಿ 11956 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಹಾಗೂ 2765 ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ.

 

ಬಾಲ ಸ್ನೇಹಿ ಯೋಜನೆ

 

ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸುವ ಪ್ರಯತ್ನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಬಾಲಸ್ನೇಹಿ ಹೆಸರಿನಲ್ಲಿ ನವೀನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬಾಲಸ್ನೇಹಿಯಲ್ಲಿ ಹಲವಾರು ವರ್ಣರಂಜಿತ ಮತ್ತು ವಿಷಯ ಸಂಬಂಧಿತ ದೃಶ್ಯಗಳನ್ನು ಅಂನಗವಾಡಿ ಕೇಂದ್ರಗಳಲ್ಲಿ ರಚಿಸಲಾಗಿದೆ.
ಬಾಲಸ್ನೇಹಿ ವೈಶಿಷ್ಠತೆಯಂದರೆ ಮಕ್ಕಳು ಸಂತೋಷದಿಂದ ತಾವೇ ಕಲಿಯುತ್ತಾರೆ.ಅಂಗನವಾಡಿ ಕೇಂದ್ರವನ್ನು ಮಕ್ಕಳಿಗಾಗಿ ಸಂತೋಷ ಮತ್ತು ಆನಂದದಾಯಕ ಸ್ಥಳವನ್ನಾಗಿ ಮಾಡಲು ಬಾಲಸ್ನೇಹಿಯು ಪ್ರಮುಖ ಅಂಶವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರವು 10000 ಅಂಗನವಾಡಿ ಕೇಂದ್ರಗಳನ್ನು ಬಾಲಸ್ನೇಹಿ ಕೇಂದ್ರಗಳನ್ನಾಗಿ ಪರಿವರ್ತಿಸಿದೆ.
2016-17 ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ನವೀನ ರೀತಿಯಲ್ಲಿ ಇರುವ ಸಂಪನ್ಮೂಲಗಳನ್ನು ಉಪಯೋಗಿಸಿ ಹೆಚ್ಚಿನ ಶೈಕ್ಷಣಿಕ ಮೌಲ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ.
2017-18 ನೇ ಸಾಲಿನ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಪೂರಕವಾಗಿ ಅಂಗನವಾಡಿ ಕೇಂದ್ರಕ್ಕೆ ಆಕರ್ಷಸಿಸಲು 5000 ಅಂಗನವಾಡಿ ಕೇಂದ್ರಗಳನ್ನು ಶಿಶು ಸ್ನೇಹಿ ಕೇಂದ್ರಗಳನ್ನಾಗಿ ಮಾಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ನೀಡುತ್ತಿರುವ ಸೌಲಭ್ಯಗಳು:

 

 • ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಗೌರವಧನವನ್ನು ರೂ.6000/- ರಿಂದ ರೂ.8000/- ಹಾಗೂ ರೂ.3000/- ರಿಂದ ರೂ.4000/- ಅನುಕ್ರಮವಾಗಿ ಹೆಚ್ಚಿಸಲಾಗಿದೆ.

 • 20 ದಿನಗಳ ವಾರ್ಷಿಕ ಸಾಂದರ್ಭಿಕ ರಜೆ

 • ಪ್ರತಿ ವರ್ಷ ಮೇ ತಿಂಗಳಲ್ಲಿ 15 ದಿನಗಳ ಬೇಸಿಗೆ ರಜೆ

 • ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರು ಸೇವೆಯಲ್ಲಿರುವಾಗ ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಪರಿಹಾರವನ್ನು ಮತ್ತು ತೀವ್ರತರವಾದ ಖಾಯಿಲೆಗಳಿಂದ ನರಳುತ್ತಿದ್ದಲ್ಲಿ ಆರ್ಥಿಕ ಪರಿಹಾರವನ್ನು ಈ ಯೋಜನೆಯಡಿ ನೀಡಲಾಗುತ್ತದೆ. ರೂ.20,000/- ಗಳನ್ನು ಮರಣ ಹೊಂದಿದ ಕಾರ್ಯಕರ್ತೆಯರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಮತ್ತು ರೂ.10,000/-ಗಳನ್ನು ಮರಣ ಹೊಂದಿದ ಅಂಗನವಾಡಿ ಸಹಾಯಕಿಯರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ನೀಡಲಾಗುತ್ತಿದೆ.

 • ಸೆಪ್ಟೆಂಬರ್ 2014 ರ ನಂತರ ಮರಣ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರಿಗೆ ಮರಣ ಪರಿಹಾರದ ಮೊತ್ತವನ್ನು ರೂ.50,000/- ಕ್ಕೆ ಹೆಚ್ಚಿಸಲಾಗಿದೆ. ಕನಿಷ್ಠ ಒಂದು ವರ್ಷ ಸೇವೆ ಪೂರೈಸಿರುವ ಕಾರ್ಯಕರ್ತೆಯರು/ಸಹಾಯಕಿಯರು ಈ ಆರ್ಥಿಕ ಸಹಾಯಕ್ಕೆ ಅರ್ಹರಿರುತ್ತಾರೆ.

 • ಸೇವೆಯಲ್ಲಿ ಇರುವಾಗಿ ಮರಣ ಹೊಂದಿದಲ್ಲಿ ಅವರ ಅಂತ್ಯಕ್ರೀಯೆಗಾಗಿ ರೂ.5000/- ಗಳನ್ಮ್ನ ನೀಡಲಾಗುತ್ತಿದೆ.

 • ಹೊಸ ಪಿಂಚಣಿ ಯೋಜನೆಯಡಿ 18-55 ವರ್ಷದ ಅಂ.ಕಾರ್ಯಕರ್ತೆ/ಅಂ. ಸಹಾಯಕಿಯರಿಂದ ಕ್ರಮವಾಗಿ ರೂ.150 ಹಾಗು ರೂ.84 ಮಾಹೆಯಾನ ವಂತಿಗೆಯಲ್ಲಿ ಪಡೆದು ವಸೂಲಿ ಮಾಡಿ ಅಷ್ಠೇ ಮೊತ್ತದ ವಂತಿಗೆಯನ್ನು ಸರ್ಕಾರ ಭರಿಸುತ್ತದೆ.

 • ವರ್ಷಕ್ಕೆ 2 ಸೀರೆ, ಪ್ರತಿ ಸೀರೆಗೆ ರೂ.400/- ದಂತೆ.

ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಭರಿಸುವ ಯೋಜನೆ

 

ಈ ಯೋಜನೆಯಡಿ ತೀವ್ರ ನ್ಯೂನಪೋಷಣೆ ಗೊಳಗಾದ ಮಕ್ಕಳ ಪೌಷ್ಠಿಕ ಮಟ್ಟ ಸುಧಾರಿಸಿ ಸಾಮಾನ್ಯ ದರ್ಜೆಗೆ ತರಲು ವೈದ್ಯಾಧಿಕಾರಿಗಳ ಸೂಚನೆಯಂತೆ ಔಷದೋಪಚಾರ ಹಾಗೂ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವರ್ಷಕ್ಕೆ ರೂ.2000/-ನ್ನು ನೀಡಲಾಗುತ್ತಿದೆ.

 ಪ್ರಾಯಪೂರ್ವ ಬಾಲಕಿಯರ ಯೋಜನೆ

      ಈ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ (SNP) ಮತ್ತು ಪೌಷ್ಠಿಕೇತರ ಅಂಶ (Non-Nutrition Components) ಗಳ ಸೇವೆಯನ್ನು ಕಿಶೋರಿಯರಿಗೆ ನೀಡಲಾಗುತ್ತಿದೆ. ಪೂರಕ ಪೌಷ್ಠಿಕ ಆಹಾರ (SNP) ವನ್ನು 11-14 ವರ್ಷದ ಶಾಲೆಯಿಂದ ಹೊರಗೆ ಉಳಿದ ಕಿಶೋರಿಯರಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಒದಗಿಸಲು ಕೇಂದ್ರ ಸರ್ಕಾರದ ನಿರ್ದೇಶನವಿರುತ್ತದೆ.
ಪೌಷ್ಠಿಕೇತರ ಅಂಶದಡಿ (Non-Nutrition Components) ಕಿಶೋರಿಯರಿಗೆ ಆರೋಗ್ಯ ತಪಾಸಣೆ, ಪೌಷ್ಠಕತೆ ಮತ್ತು ಆರೋಗ್ಯ ಶಿಕ್ಷಣ (NHE) ,ಕುಟುಂಬ ಕಲ್ಯಾಣ, ಮಕ್ಕಳ ಪಾಲನೆ, ಗೃಹ ನಿರ್ವಹಣೆ, ಸಂತಾನೋತ್ಪತಿ ಮತ್ತು ಲೈಂಗಿಕ ಆರೋಗ್ಯ, ಜೀವನ ಕೌಶಲ್ಯ ಶಿಕ್ಷಣ, ವೃತ್ತಿಪರ/ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ.

ಪ್ರಧಾನ ಮಂತ್ರ ಮಾತೃವಂದನಾ ಯೋಜನೆ:

 

      2010-11ನೇ ಸಾಲಿನಿಂದ ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ (ಐಜಿಎಮ್‍ಎಸ್‍ವೈ)ಯನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ 2 ಜಿಲ್ಲೆಗಳಾದ ಕೋಲಾರ ಹಾಗೂ ಧಾರವಾಡದಲ್ಲಿ ಜಾರಿಗೊಳಿಸಲಾಗಿದೆ. ಇದರಡಿ ಗರ್ಭಿಣಿಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಠಿಕತೆ ಕುರಿತು ಶಿಕ್ಷಣ, ಆರೋಗ್ಯ ಸಲಹೆ IYCF ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳನ್ನು ಪ್ರಮುಖ ವೇದಿಕೆಯನ್ನಾಗಿ ಉಪಯೋಗಿಸಿಕೊಳ್ಳಲಾಗುತ್ತದೆ.
2017-18 ನೇ ಸಾಲಿನಿಂದ ಸದರಿ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಎಂಬ ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.
ಈ ಯೋಜನೆಯು 60:40 ಕೇಂದ್ರ:ರಾಜ್ಯ ಸರ್ಕಾರದ ಧನ ಸಹಾಯ ಯೋಜನಯಾಗಿದೆ. 0-6 ತಿಂಗಳವರೆಗೆ ಕೇವಲ ತಾಯಿ ಎದೆ ಹಾಲುಣಿಸುವುದು, ಹೆರಿಗೆಯಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದು ಹಾಗೂ ಅತಿ ಸಣ್ಣಮಕ್ಕಳಿಗೆ ಉಣಿಸುವ ಅಭ್ಯಾಸಗಳನ್ನು (ಐವೈಸಿಎಫ್)ಬೆಳಸಿಕೊಳ್ಳುವ ಬಗ್ಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಹಾಗೂ ಗರ್ಭಿಣಿಯರಿಗೆ ಬಾಣಂತಿಯರಿಗೆ ಆರೋಗ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುವುದು. ಮೊದಲನೆ ಕಂತು ರೂ. 1000/- ಗಳನ್ನು, ಗರ್ಭಿಣಿಯಾಗಿ 6 ತಿಂಗಳಲ್ಲಿ , ಎರಡನೇ ಕಂತು ರೂ. 2000/- ಗಳನ್ನು ಗರ್ಭಿಣಿಯಾಗಿ 6 ತಿಂಗಳ ನಂತರ ನೀಡಲಾಗುವುದು, ಮೂರನೇಯ ಕಂತು ರೂ.2000/- ಗಳನ್ನುಮಗು ಮೊದಲನೇ ಹಂತದ ಚುಚ್ಚುಮದ್ದು ಪಡೆದ ನಂತರ ಒಟ್ಟು 3 ಕಂತುಗಳಲ್ಲಿ ರೂ 5000 ಗಳ ಹೆರಿಗೆ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಖಾಖೆಗೆ ಜಮಾ ಮಾಡಲಾಗುವುದು. ಮೇಲ್ಕಂಡ ಫಲಾನುಭವಿಗಳು ಎನ್‍ಆರ್‍ಹೆಚ್‍ಎಮ್ ಅಡಿ ಜನನಿ ಸುರಕ್ಷಾ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ರಾಷ್ಟ್ರೀಯ ಶಿಶುಪಾಲನಾ ಕೇಂದ್ರ ಯೋಜನೆ

ರಾಷ್ಟ್ರೀಯ ಶಿಶು ಪಾಲನಾ ಕೇಂದ್ರ ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, ಸದರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪಾಲು ಅನುಕ್ರಮವಾಗಿ 60:30:10 ಅನುಪಾತದಂತೆ ಅನುದಾನವನ್ನು ಒದಗಿಸಲಾಗಿರುತ್ತದೆ. ನವೀಕೃತಗೊಂಡ ಈ ಯೋಜನೆಯು 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಪ್ರಾರಂಭಿಕ ಬಾಲ್ಯಾವಸ್ಥೆಯ ಸೇವೆಗಳನ್ನು ನೀಡುವಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುತ್ತದೆ.
ಉದ್ಯೋಗಸ್ಥ ತಾಯಂದಿರು ತಮ್ಮ ಕೆಲಸದ ಅವಧಿಯಲ್ಲಿ ಮಕ್ಕಳ ಸಮಗ್ರ ಪೋಷಣೆಗಾಗಿ ಶಿಶು ಪಾಲನಾ ಕೇಂದ್ರದಲ್ಲಿ ತಮ್ಮ ಮಕ್ಕಳನ್ನು ಕಳುಹಿಸಲು ಅನುಕೂಲವಾಗುತ್ತದೆ.

ಉದ್ದೇಶಗಳು

 • ಉದ್ಯೋಗಸ್ಥ ತಾಯಂದಿರ 6 ತಿಂಗಳಿಂದ 6 ವರ್ಷದ ಮಕ್ಕಳನ್ನು ದಿನಪೂರ್ತಿ ಸುರಕ್ಷಿತವಾಗಿ ನೋಡಿಕೊಳ್ಳುವುದು.

 • ಮಕ್ಕಳ ಪೌಷ್ಠಿಕ ಹಾಗೂ ಆರೋಗ್ಯಮಟ್ಟವನ್ನು ಸುಧಾರಿಸುವುದು.

 • ಮಕ್ಕಳ ಭೌತಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವುದು

 • ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ತಾಯಂದಿರಿಗೆ ಹಾಗೂ ಪೋಷಕರಿಗೆ ಶಿಕ್ಷಣ ನೀಡುವುದು

ಸೇವೆಗಳು

 • ದಿನದ ಆರೈಕೆ, ವಿಶ್ರಾಂತಿ ಸೌಲಭ್ಯ ಒಳಗೊಂಡಿರುತ್ತದೆ.

 • 0-3 ವರ್ಷದ ಮಕ್ಕಳಿಗೆ ಪ್ರಾಥಮಿಕ ಉತ್ತೇಜನ ನೀಡುವುದು ಹಾಗೂ 3-6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡುವುದು.

 • ಪೂರಕ ಪೌಷ್ಠಿಕ ಆಹಾರ.

 • ಬೆಳವಣಿಗೆ ಪರಿಶೀಲನೆ.

 • ಆರೋಗ್ಯ ತಪಾಸಣೆ ಮತ್ತು ಚುಚ್ಚುಮದ್ದು

 

ಇತ್ತೀಚಿನ ನವೀಕರಣ​ : 03-09-2022 04:47 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080