ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಸ್ತ್ರೀಶಕ್ತಿ ಯೋಜನೆ

ಮಹಿಳಾ ಸಬಲೀಕರಣದ ಮೂಲಕ ರಾಷ್ಟ್ರದ ಪ್ರಗತಿ"

 

Seventh slide

 
ಸ್ತ್ರೀಶಕ್ತಿ ಯೋಜನೆಯ ಧ್ಯೇಯೋದ್ದೇಶಗಳು,ಸೌಲಭ್ಯಗಳು
 • ಸುತ್ತುನಿಧಿ ಕನಿಷ್ಟ 6 ತಿಂಗಳ ಉಳಿತಾಯ ನಿರ್ವಹಿಸಿರುವ ಪ್ರತಿಯೊಂದು ಗುಂಪಿಗೆ ಸುತ್ತುನಿಧಿಯಾಗಿ ಪ್ರಥಮ ಹಂತದಲ್ಲಿ ರೂ.5000/-ಗಳನ್ನು ನೀಡಲಾಗಿದೆ.
  ಹೆಚ್ಚುವರಿ ಸುತ್ತುನಿಧಿ 2014-15ನೇ ಸಾಲಿನಿಂದ 2017-18ನೇ ವರೆಗೆ ಸುತ್ತುನಿಧಿ ಮಿತಿಯನ್ನು ರೂ.5000/-ದಿಂದ ರೂ.25000/-ಗಳಿಗೆ ಹಂತ ಹಂತವಾಗಿ ಹೆಚ್ಚಿಸಿದೆ, 2014-15 ರಿಂದ 2017-18ನೇ ಸಾಲಿನವರೆಗೆ ಪ್ರತಿ ವರ್ಷ ಪ್ರತಿ ಗುಂಪಿಗೆ ರೂ.5000/ದಂತೆ ನೀಡಲಾಗುತ್ತಿದೆ.
 • ಸಾಲದ ಮೇಲಿನ ಬಡ್ಡಿಗೆ ಶೇಕಡ 6ರ ಸಹಾಯ ಧನ ರೂ.25,000/-ದಿಂದ ರೂ.1.00 ಲಕ್ಷದವರೆಗೆ ಸಾಲವನ್ನು ಪಡೆಯುವ ಸ್ತ್ರೀಶಕ್ತಿ ಗುಂಪುಗಳಿಗೆ, ಸಾಲದ ಮೇಲಿನ ಬಡ್ಡಿ ದರಕ್ಕೆ ಶೇಕಡ 6ರ ಸಹಾಯ ಧನವನ್ನು ಒದಗಿಸಲಾಗುತ್ತದೆ.
 • ಅಧಿಕ ಉಳಿತಾಯ ಮಾಡಿರುವ ಗುಂಪುಗಳಿಗೆ ಪ್ರೋತ್ಸಾಹಧನ ರೂ.75,000/- ದಿಂದ ರೂ.1.00 ಲಕ್ಷದವರೆಗೆ ಉಳಿತಾಯ ಮಾಡಿರುವ ಗುಂಪುಗಳಿಗೆ ತಲಾ ರೂ.15000/-ಗಳ ಹಾಗೂ ರೂ.1.00 ಲಕ್ಷಕ್ಕೂ ಹೆಚ್ಚು ಉಳಿತಾಯ ಮಾಡಿರುವ ಅರ್ಹ ಗುಂಪುಗಳಿಗೆ ತಲಾ ರೂ.20,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.
 • ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಗುಂಪುಗಳಿಗೆ ಪ್ರೋತ್ಸಾಹಧನ ಸ್ತ್ರೀಶಕ್ತಿ ಗುಂಪುಗಳು ವಿವಿಧ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಗುಂಪುಗಳಿಗೆ ತಲಾ ರೂ. 5,000/- ದಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ.
 • ವಸ್ತು ಪ್ರದರ್ಶನ ಮತ್ತು ಮಾರಾಟಮೇಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಏರ್ಪಡಿಸಲು ಪ್ರತಿ ಜಿಲ್ಲೆಗೆ ಪ್ರತಿ ವರ್ಷ ರೂ.75,000/-ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.
 • ಸ್ತ್ರೀಶಕ್ತಿ ಗುಂಪು, ಸಮಾಜದ ಬಡ ಕುಟುಂಬದ, ಸಮಾನ ಮನಸ್ಕರÀ, ಸಮಾನ ವಯಸ್ಕರ, ಆರ್ಥಿಕ, ಸಾಮಾಜಿಕ ಹಿನ್ನೆಲೆಯುಳ್ಳ ಪರಸ್ಪರ ವಿಶ್ವಾಸದಿಂದ ಕೂಡಿದ 15ರಿಂದ 20 ಜನ ಮಹಿಳೆಯರು ಒಂದಡೆ ಸೇರಿ ತಮ್ಮ ಸಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸ್ವಇಚ್ಚೆಯಿಂದ ರಚಿಸಿಕೊಂಡ ಗುಂಪಾಗಿದೆ.

ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ

 • ಒಂದು ತಾಲ್ಲೂಕಿನಲ್ಲಿರುವ ಎಲ್ಲಾ ಸ್ತ್ರೀ ಶಕ್ತಿ ಗೊಂಚಲು ಗುಂಪುಗಳು ಸೇರಿ ತಾಲೂಕು ಮಟ್ಟದಲ್ಲಿ ಒಕ್ಕೂಟವನ್ನು ರಚಿಸಿಕೊಂಡಿವೆ.

 • ಈ ಒಕ್ಕೂಟಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿ ಮಾಡಿಸಿದೆ. ಇದನ್ನು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಥವಾ ಸ್ತ್ರೀಶಕ್ತಿ ತಾಲ್ಲೂಕು ಒಕ್ಕೂಟ ಎಂದು ಕರೆಯಲಾಗಿದೆ.

ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ರಚನೆ:- ಈ ಒಕ್ಕೂಟದಲ್ಲಿ ತಾಲ್ಲೂಕಿನ ಸ್ತ್ರೀ ಶಕ್ತಿ ಗುಂಪುಗಳಿಂದ ಆಯ್ಕೆಯಾದ ಒಟ್ಟು 8 - 11 ಸದಸ್ಯರು ಕಾರ್ಯಕಾರಿ ಮಂಡಳಿ ಸದಸ್ಯತ್ವ ಹೊಂದಿರುತ್ತಾರೆ. ತಾಲ್ಲೂಕಿನ ಎಲ್ಲಾ ಸ್ತ್ರೀ ಶಕ್ತಿ ಗೊಂಚಲು ಗುಂಪುಗಳ ಸದಸ್ಯರು ಈ ಒಕ್ಕೂಟದಲ್ಲಿ ಸದಸ್ಯತ್ವ ಪಡೆದು ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಾರೆ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿ.ಅ.ಯೊ.ಅ ಮೇಲ್ವಿಚಾರಕರು ಒಕ್ಕೂಟದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ

 • ಒಂದು ಜಿಲ್ಲೆಯಲ್ಲಿ ಇರುವ ಎಲ್ಲಾ ಸ್ತ್ರೀ ಶಕ್ತಿ ತಾಲ್ಲೂಕು ಒಕ್ಕೂಟಗಳು ಸೇರಿ ಜಿಲ್ಲಾ ಮಟ್ಟದಲ್ಲಿ ಒಕ್ಕೂಟವನ್ನು ರಚಿಸಿಕೊಂಡಿವೆ.

 • 2016-17ನೇ ಸಾಲಿನಲ್ಲಿ ಸ್ತ್ರೀಶಕ್ತಿ ಸಮೃದ್ಧಿ ಯೋಜನೆಯಡಿ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಒಕ್ಕೂಟಗಳನ್ನು ರಚಿಸಲಾಗಿದೆ.

 • ಈ ಒಕ್ಕೂಟಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿ ಮಾಡಿಸಿದೆ. ಇದನ್ನು ಸ್ತ್ರೀಶಕ್ತಿ ಜಿಲ್ಲಾ ಒಕ್ಕೂಟ ಎಂದು ಕರೆಯಲಾಗಿದೆ.

ತಾಲ್ಲೂಕು / ಜಿಲ್ಲಾ / ವಿಭಾಗೀಯ ಮಟ್ಟದ ಸ್ತ್ರೀಶಕ್ತಿ ಭವನಗಳು:- ಸ್ತ್ರೀಶಕ್ತಿ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು, ವಿವಿಧ ರೀತಿಯ ತರಬೇತಿಗಳನ್ನು ನಡೆಸಲು ಮತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಾಲ್ಲೂಕು, ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಸ್ತ್ರೀಶಕ್ತಿ ಭವನಗಳನ್ನು ಮತ್ತು ಮಾರುಕಟ್ಟೆ ಮಳಿಗೆಗಳನ್ನು ತಾಲ್ಲೂಕು, ಜಿಲ್ಲೆ ಹಾಗೂ ಮಟ್ಟದಲ್ಲಿ ನಿರ್ಮಿಸಲಾಗಿದೆ.

ಇತ್ತೀಚಿನ ನವೀಕರಣ​ : 26-02-2021 03:30 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ