ಅಭಿಪ್ರಾಯ / ಸಲಹೆಗಳು

ಸ್ತ್ರೀಶಕ್ತಿ ಯೋಜನೆ

 

 

ಸ್ತ್ರೀಶಕ್ತಿ ಯೋಜನೆ

 

ರಾಜ್ಯದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ''ಸ್ತ್ರೀಶಕ್ತಿ'' ಯೋಜನೆಯನ್ನು 2000-01 ನೇ ವರ್ಷದಿಂದ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 176 ತಾಲ್ಲೂಕುಗಳ ನಗರ ಮತ್ತು  ಗ್ರಾಮೀಣ ಪ್ರದೇಶದಲ್ಲಿ ಸ್ತ್ರೀಶಕ್ತಿ ಗುಂಪುಗಳನ್ನು ರಚನೆ ಮಾಡಲಾಗಿದೆ.ಯೋಜನೆಯ ಮೂಲಕ ಮಹಿಳೆಯರ ಅಬಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಅನುದಾನವನ್ನು ಮೀಸಲಿಟ್ಟು ಬೃಹತ್ ಪ್ರಮಾಣದಲ್ಲಿ ಮಹಿಳೆಯರನ್ನು ಸಂಘಟಿಸಲು ಪ್ರಯತ್ನಿಸಿರುವುದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

 

ಸ್ತ್ರೀಶಕ್ತಿ ಯೋಜನೆಯ ಧ್ಯೇಯೋದ್ದೇಶಗಳು:-

 • ಮಹಿಳೆಯರಿಗೆ ಆರ್ಥಿಕ ಪ್ರಗತಿಯನ್ನು ಸಾದಿsಸುವಂತಹ ಹಾಗೂ ಸಾಮಾಜಿಕ ಬದಲಾಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಪ್ರಕ್ರಿಯೆಯನ್ನು ಬಲಪಡಿಸುವುದು.

 • ರಾಜ್ಯದಾದ್ಯಂತ ಸ್ವಸಹಾಯ ಮಹಿಳಾ ಗುಂಪುಗಳನ್ನು ರಚಿಸುವುದು ಹಾಗೂ ಅವರಲ್ಲಿ ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಿ ಸಂಪನ್ಮೂಲಗಳ ಮೇಲೆ ಹತೋಟಿ ಹಾಗೂ ಸಾಮೀಪ್ಯವನ್ನು ಸಾದಿsಸುವುದು.

 • ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ,  ಆರ್ಥಿಕ ಸ್ಥಿರತೆಯನ್ನು ಮೂಡಿಸುವುದು.

 • ವಿವಿಧ ಇಲಾಖೆಗಳ ಸೇವೆಗಳನ್ನು ಒಗ್ಗೂಡಿಸುವ ಒಮ್ಮುಖಗೊಳಿಸುವುದರ ಮೂಲಕ ಮಹಿಳಾ ಗುಂಪಿನ ಸದಸ್ಯರುಗಳಿಗೆ ವಿವಿಧ ಇಲಾಖೆಗಳ ಅಬಿsವೃದ್ಧಿ ಕಾರ್ಯಕ್ರಮಗಳ ಫಲ ದೊರೆಯುವಂತೆ ಅವಕಾಶ ಕಲ್ಪಿಸುವದು ಹಾಗೂ ಸಾಲ ನೀಡುವಂತಹ ಸಂಸ್ಥೆಗಳಿಗೆ ಸಾಮೀಪ್ಯ ಒದಗಿಸುವುದರ ಜೊತೆಗೆ ಸಾಲ ದೊರೆಯುವಂತೆ ಕ್ರಮ ಕೈಗೊಳ್ಳುವುದು.

 

ಸ್ತ್ರೀಶಕ್ತಿ ಯೋಜನೆಯಡಿ ನೀಡುತ್ತಿರುವ ಸೌಲಭ್ಯಗಳು:-

 

ಸುತ್ತುನಿದಿ(ಹೆಚ್ಚುವರಿ ಸುತ್ತುನಿಧಿ)

ಬ್ಯಾಂಕ್‌ ಲಿಂಕೇಜ್;-

ಸಾಲದ ಮೇಲಿನ ಬಡ್ಡಿಗೆ ಶೇಕಡ ೬ರ ಸಹಾಯ ಧನ

ಅಧಿಕ ಉಳಿತಾಯ ಮಾಡಿರುವ ಗುಂಪುಗಳಿಗೆ ಪ್ರೋತ್ಸಾಹಧನ

ವಿವಿಧ ಹಂತಗಳಲ್ಲಿ ತರಬೇತಿ

 

ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಗುಂಪುಗಳಿಗೆ ಪ್ರೋತ್ಸಾಹಧನ:

ವಸ್ತು ಪ್ರದರ್ಶನ ಮತ್ತು ಮಾರಾಟಮೇಳ:-

ಮಾರುಕಟ್ಟೆ ಸೌಲಭ್ಯ-ನೇರ ಹಾಗೂ ಆನ್‌ಲೈನ್:

 

ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಿಗೆ ಹಾಗೂ ತಾಲ್ಲೂಕು ಒಕ್ಕೂಟಗಳಿಗೆ ಪ್ರಶಸ್ತಿ:-

ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ರಚನೆ:- 

ಒಂದು ತಾಲ್ಲೂಕಿನಲ್ಲಿರುವ ಎಲ್ಲಾ ಸ್ತ್ರೀ ಶಕ್ತಿ ಗೊಂಚಲು ಗುಂಪುಗಳು ಸೇರಿ ತಾಲೂಕು  ಮಟ್ಟದಲ್ಲಿ ಒಕ್ಕೂಟವನ್ನು ರಚಿಸಿಕೊಂಡಿವೆ. ಈ ಒಕ್ಕೂಟಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ  ನೋಂದಣಿ ಮಾಡಿಸಿದೆ. ಇದನ್ನು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಥವಾ ಸ್ತ್ರೀಶಕ್ತಿ ತಾಲ್ಲೂಕು  ಒಕ್ಕೂಟ ಎಂದು ಕರೆಯಲಾಗಿದೆ.

 

ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ: 

ಒಂದು ಜಿಲ್ಲೆಯಲ್ಲಿ  ಇರುವ ಎಲ್ಲಾ ಸ್ತ್ರೀ ಶಕ್ತಿ ತಾಲ್ಲೂಕು ಒಕ್ಕೂಟಗಳು ಸೇರಿ ಜಿಲ್ಲಾ ಮಟ್ಟದಲ್ಲಿ  ಒಕ್ಕೂಟವನ್ನು ರಚಿಸಿಕೊಂಡಿವೆ. 2016-17ನೇ ಸಾಲಿನಲ್ಲಿ “ಸ್ತ್ರೀಶಕ್ತಿ ಸಮೃದ್ಧಿ” ಯೋಜನೆಯಡಿ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಒಕ್ಕೂಟಗಳನ್ನು ರಚಿಸಲಾಗಿದೆ. ಈ ಒಕ್ಕೂಟಗಳನ್ನು  ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿ  ನೋಂದಣಿ ಮಾಡಿಸಿದೆ.  ಇದನ್ನು ಸ್ತ್ರೀಶಕ್ತಿ ಜಿಲ್ಲಾ  ಒಕ್ಕೂಟ ಎಂದು ಕರೆಯಲಾಗಿದೆ.

 

ತಾಲ್ಲೂಕು / ಜಿಲ್ಲಾ / ವಿಭಾಗೀಯ ಮಟ್ಟದ ಸ್ತ್ರೀಶಕ್ತಿ ಭವನಗಳು :- 

ಸ್ತ್ರೀಶಕ್ತಿ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು, ವಿವಿಧ ರೀತಿಯ ತರಬೇತಿಗಳನ್ನು ನಡೆಸಲು ಮತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಾಲ್ಲೂಕು, ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಸ್ತ್ರೀಶಕ್ತಿ ಭವನಗಳನ್ನು ಮತ್ತು ಮಾರುಕಟ್ಟೆ ಮಳಿಗೆಗಳನ್ನು ತಾಲ್ಲೂಕು, ಜಿಲ್ಲೆ ಹಾಗೂ ಮಟ್ಟದಲ್ಲಿ ನಿರ್ಮಿಸಲಾಗಿದೆ.

 

ತಾಲ್ಲೂಕು ಸ್ತ್ರೀಶಕ್ತಿ ಭವನ

 

ಜಿಲ್ಲಾ ಸ್ತ್ರೀಶಕ್ತಿ ಭವನ

 

ವಿಭಾಗೀಯ ಮಟ್ಟದ ತರಬೇತಿ ಕೇಂದ್ರ

 

 

ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆ:

 

75 ನೇ ಸ್ವಾತಂತ್ರ್ಯ ದಿನದ ಸ್ಮರಣಾರ್ಥವಾಗಿ  ಘೋಷಣೆ ಮಾಡಲಾದ 13 ಅಮೃತ ಯೋಜನೆಗಳ ಪೈಕಿ "7500 ಸ್ವಸಹಾಯ ಗುಂಪುಗಳನ್ನು ಕಿರುಉದ್ದಿಮೆ ಸಂಸ್ಥೆಗಳನ್ನಾಗಿ ರೂಪಿಸಲು ತಲಾ ರೂ.1.00 ಲಕ್ಷ ದಂತೆ ಬೀಜ ಧನವನ್ನು (ಸೀಡ್ ಮನಿ) ಒದಗಿಸಲಾಗುವುದು ಎಂದು ಘೋಷಣೆ ಮಾಡಲಾಗಿರುತ್ತದೆ. ಸದರಿ ಯೋಜನೆಗೆ ಸರ್ಕಾರದ ಆದೇಶ ಸಂ. ಮಮಇ 63 ಮಮಅ 2021,  ದಿ: 23.8.2021 ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿರುತ್ತದೆ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಗುಂಪುಗಳನ್ನು ಆಯ್ಕೆ ಮಾಡಲು ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚನೆ  ಮಾಡಲಾಗಿರುತ್ತದೆ. ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ.

 

ಗೃಹ ಲಕ್ಷ್ಮೀ ಯೋಜನೆ: ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂ.ಗಳನ್ನು ವರ್ಗಾಯಿಸಲಾಗುವುದು. ಈ ಯೋಜನೆಗಾಗಿ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ. ಸರ್ಕಾರದ ಆಡಳಿತಾತ್ಮಾಕ ಆದೇಶ ಮಮಇ 70 ಮಮಅ 2023, ದಿನಾಂಕ: 06.06.2023 ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 

 

 

ಇತ್ತೀಚಿನ ನವೀಕರಣ​ : 21-08-2023 02:59 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080