ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮ ಅಭಿವೃದ್ಧಿ ಮತ್ತು ಉಸ್ತುವಾರಿ - ಪಿಡಿಎಂ

ಪಿಡಿಎಂ ಶಾಖೆಯ ಕಾರ್ಯಗಳು/ ಕಾರ್ಯಚಟುವಟಿಕೆಗಳು

 

ಮಕ್ಕಳ ಕಲ್ಯಾಣ:

 

ಭಾಗ್ಯಲಕ್ಷ್ಮಿ ಯೋಜನೆ:-

 

ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ “ಭಾಗ್ಯಲಕ್ಷ್ಮಿ” ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. 

 

ಭಾಗ್ಯಲಕ್ಷ್ಮಿ -ಸುಕನ್ಯಾ ಸಮೃದ್ಧಿ ಖಾತೆ ಯೋಜನೆ (2020-21)  2006-07 ರಿಂದ 2019-20 ನೇ ಸಾಲಿನವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸುಸಂಸ್ಥೆಯಾಗಿದ್ದು, 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರದ ಆದೇಶ ಸಂಖ್ಯೆ:ಮಮಇ 87 ಮಮಅ 2020, ದಿನಾಂಕ 11-10-2020 ರಂತೆ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಲಾಗಿರುತ್ತದೆ.ಸದರಿ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ.3000/-ದಂತೆ 15 ವರ್ಷಗಳವರೆಗೆ ಒಟ್ಟು ರೂ.45,000/-ಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. 21 ವರ್ಷ ಅವಧಿ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ವ ಮೊತ್ತ ರೂ.1.27 ಲಕ್ಷ ನೀಡಲಾಗುತ್ತದೆ. 10 ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಯೋಜನೆಯಡಿ ಅವಕಾಶವಿರುತ್ತದೆ. ಉಳಿದಂತೆ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಅಳವಡಿಸಲಾಗಿರುವ ಇನ್ನಿತರೆ ಕಾರ್ಯ ವಿಧಾನಗಳು ಮುದುವರೆಯುವುದು.

 

ಉಜ್ವಲ ಕಾರ್ಯಕ್ರಮ:

 

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯವು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಹಾಗೂ ಸಾಗಾಣಿಕೆಗೆ ಹಾಗೂ ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟವರನ್ನು ರಕ್ಷಿಸಲು, ಇವರಿಗೆ ಪುನರ್‌ವಸತಿ ಕಲ್ಪಿಸಲು ಮತ್ತು ಕುಟುಂಬದವರೊಂದಿಗೆ ಪುನರ್ ವಿಲೀನಗೊಳಿಸಲು ಉಜ್ವಲ ಎಂಬ ಸಮಗ್ರ ಯೋಜನೆಯನ್ನು ರೂಪಿಸಿರುತ್ತದೆ.

 

ಉಜ್ವಲ

 

ಯೋಜನೆಯ ಉದ್ದೇಶಗಳು :

  • ಸಮಾಜವನ್ನು ಸಜ್ಜುಗೊಳಿಸಿ, ಸ್ಥಳೀಯ ಸಮುದಾಯವನ್ನು ತೊಡಗಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾರ್ವಜನಿಕ ಸಭೆಗಳನ್ನು ನಡೆಸಿ, ಕಾರ್ಯಗಾರ/ವಿಚಾರ ಗೋಷ್ಠಿಗಳ ಮೂಲಕ ಹಾಗೂ ನವೀನ ಚಟುವಟಿಕೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳು ವಾಣಿಜ್ಯ ಲೈಂಗಿಕ ದುರುಪಯೋಗಕ್ಕಾಗಿ ಸಾಗಾಣಿಕೆಯಾಗುವುದನ್ನು ತಡೆಯಲು ಕ್ರಮಕೈಗೊಳ್ಳುವುದು.
  • ಸಾಗಾಣಿಕೆಗೆ ಒಳಗಾದವರನ್ನು ಶೋಷಣೆ ಸ್ಥಳದಿಂದ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇಡಲು ಸಹಾಯ ಮಾಡುವುದು.
  • ಸಾಗಾಣಿಕೆಗೆ ಒಳಗಾದವರಿಗೆ ಮೂಲಭೂತ ಸೌಲಭ್ಯ, ಆಶ್ರಯ, ಆಹಾರ, ವಸ್ತ್ರ, ಸಮಾಲೋಚನೆ ಒಳಗೊಂಡಂತೆ ವೈದ್ಯಕೀಯ ಸೌಲಭ್ಯ, ಕಾನೂನಿನ ನೆರವು ಮತ್ತು ಮಾರ್ಗದರ್ಶನ ಹಾಗೂ ವೃತ್ತಿ ತರಬೇತಿ ಸೇರಿದಂತೆ ತಕ್ಷಣ ಮತ್ತು ದೀರ್ಘಕಾಲಿಕ ಪುನರ್ವಸತಿ ಸೇವೆಯನ್ನು ಒದಗಿಸುವುದು.
  • ಸಾಗಾಣಿಕೆಗೆ ಒಳಗಾದವರನ್ನು ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ವಿಲೀನಗೊಳಿಸಲು ಸಹಾಯ ಮಾಡುವುದು.
  • ಗಡಿಪ್ರದೇಶವನ್ನು ದಾಟಿ ಬಂದಂತಹ ಸಾಗಾಣಿಕೆಗೆ ಒಳಗಾದವರನ್ನು ತನ್ನ ಮೂಲ ರಾಷ್ಟ್ರಕ್ಕೆ ಕಳುಹಿಸಿಕೊಡಲು ಸಹಾಯ ಮಾಡುವುದು.

 

ಟಾರ್ಗೆಟ್ ಗುಂಪು:

  • ವಾಣಿಜ್ಯ ಲೈಂಗಿಕ ದುರುಪಯೋಗಕ್ಕಾಗಿ ತುತ್ತಾಗಬಹುದಾದ ಮಹಿಳೆಯರು ಮತ್ತು ಮಕ್ಕಳು
  • ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟಿರುವ ಮಹಿಳೆಯರು ಮತ್ತು ಮಕ್ಕಳು

    

ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸ್ವಯಂಸೇವಾ ಸಂಸ್ಥೆಗೆ ಶೇಕಡ 60ರಷ್ಟು ಅನುದಾನವನ್ನು ಭಾರತ ಸರ್ಕಾರವು ಶೇಕಡ 30 ರಷ್ಟು ಅನುದಾನವನ್ನು ರಾಜ್ಯ ಸರ್ಕಾರವು ಒದಗಿಸುವುದು ಹಾಗೂ ಉಳಿದ ಶೇಕಡ 10ರಷ್ಟು ಅನುದಾನವನ್ನು ಸ್ವಯಂ ಸೇವಾ ಸಂಸ್ಥೆಗಳು ಭರಿಸುವುದು. ಪ್ರಸ್ತುತ ರಾಜ್ಯದಲ್ಲಿ 15 ಸರ್ಕಾರೇತರ ಸಂಸ್ಥೆಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ.

 

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿ :

 

ಮಕ್ಕಳ ಕಲ್ಯಾಣ/ಅಭಿವೃದ್ಧಿ/ರಕ್ಷಣೆ ಕ್ಷೇತ್ರದಲ್ಲಿ ನಿರತವಾಗಿರುವ ವ್ಯಕ್ತಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಅವಿರತ ಸೇವೆಗಳನ್ನು ಗುರುತಿಸಿ, ಪ್ರಶಸ್ತಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿರುತ್ತದೆ. 2018-19 ನೇ ಸಾಲಿನಿಂದ ನೇರವಾಗಿ ಆನ್ ಲೈನ್ ಮುಖಾಂತರ ಕೇಂದ್ರ ಸರ್ಕಾರದ ಇಲಾಖಾ ಮಂತ್ರಾಲಯದ ಮುಖಾಂತರ ಅರ್ಜಿಯನ್ನು ಆಹ್ವಾನಿಸಿ ಅವರೇ ಆಯ್ಕೆ ಮಾಡಿ ಸನ್ಮಾನಿಸಿರುತ್ತಾರೆ.

 

 

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಬಾಲಶಕ್ತಿ ಪುರಸ್ಕಾರ :

 

ಕ್ರೀಡೆ, ಕಲೆ, ಸಾಂಸ್ಕೃತಿಕ, ನಾವೀನ್ಯತೆ, ತಾರ್ಕಿಕ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ನೀಡುವ ಯೋಜನೆಯನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ. ಈ ಪ್ರಶಸ್ತಿಗೆ ಅಸಾಧಾರಣ ಸಾಧನೆಯನ್ನು ಮಾಡಿರುವ 5-18 ವರ್ಷದೊಳಗಿನ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ರಾಷ್ಟ್ರಮಟ್ಟದಲ್ಲಿ ಒಂದು ಮಗುವಿಗೆ ಚಿನ್ನದ ಪದಕ ಮತ್ತು ಪ್ರತಿ ರಾಜ್ಯದ/ಕೇಂದ್ರಾಡಳಿತ ಪ್ರದೇಶದ ಒಂದು ಮಗುವಿಗೆ ಬೆಳ್ಳಿ ಪದಕ ನೀಡಲಾಗುವುದು. ಚಿನ್ನದ ಪದಕ ಪಡೆದ ಮಗುವಿಗೆ ರೂ.20,000/- ನಗದು, ರೂ. 10,000/- ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಬೆಳ್ಳಿ ಪದಕ ಪಡೆದ ಮಕ್ಕಳಿಗೆ ರೂ. 10,000/- ನಗದು, ರೂ.3,000/- ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

 

 

ಬಾಲ್ಯವಿವಾಹ ನಿಷೇಧ ಕೋಶ:

 

  • ಬಾಲ್ಯವಿವಾಹ ತಡೆಗಟ್ಟುವಿಕೆ,ಬಾಲ್ಯವಿವಾಹದಿಂದ ಸಂರಕ್ಷಿಸಿದ ಬಾಲಕಿಯರ ಪುನರ್ವಸತಿ ಕ್ರಮ.
  • ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ತರಬೇತಿ, ಅರಿವು ಕಾರ್ಯಕ್ರಮಗಳು
  • ಐ.ಇ.ಸಿ. ಮೂಲಕ ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ಪ್ರಚಾರಾಂದೋಲನ ಕಾರ್ಯ

 

ಯೋಜನೆ ವಿಭಾಗ:

 

  • ಕ್ರೋಢೀಕೃತ ಆಯವ್ಯಯ / ವಾರ್ಷಿಕ ಯೋಜನೆ / ವರದಿಗಳು / ಕ್ರಿಯಾ ಯೋಜನೆ / ಆಯವ್ಯಯ ಭಾಷಣ /ಮಾಸಿಕ/ ನಿಯತಕಾಲಿಕ ವರದಿ / ಆರ್.ಟಿ.ಐ. / ಸಭೆ ಆಯೋಜನೆ, ಅನುಪಾಲನೆ, ಶಾಖೆಯ ಯೋಜನೆಗಳ ಮೇಲ್ವಿಚಾರಣೆ / ಪ್ರತಿಬಿಂಬ “ಸಿ.ಎಂ. ಡ್ಯಾಸ್ ಬೋರ್ಡ್” ಇತ್ಯಾದಿ. 

 

ಸುಧಾರಣೆ ವಿಭಾಗ:

 

ಸ್ವೀಕಾರ ಕೇಂದ್ರಗಳು:

 

ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರು ಸ್ವಇಚ್ಚೆಯಿಂದ, ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ, ಯಾವುದೇ ವ್ಯಕ್ತಿಗಳ ಮುಖಾಂತರ ಹಾಗೂ ಅನೈತಿಕ ವ್ಯವಹಾರಗಳ (ತಡೆಗಟ್ಟುವ) ಅಧಿನಿಯಮ 1956ರ ಅಡಿಯಲ್ಲಿ ನ್ಯಾಯಾಲಯದಿಂದ ಪ್ರಕರಣವನ್ನು ದಾಖಲಿಸಿ ಕಳುಹಿಸಲ್ಪಟ್ಟ ಮಹಿಳೆಯರನ್ನು ದಾಖಲಿಸಿಕೊಳ್ಳಲಾಗುವುದು. ಸಂಸ್ಥೆಯಲ್ಲಿ ನಿವಾಸಿಯರಿಗೆ ಪಾಲನೆ, ಪೋಷಣೆ, ಊಟ, ವಸತಿ, ಬಟ್ಟೆ, ವೈದ್ಯಕೀಯ ಸೌಲಭ್ಯ, ರಕ್ಷಣೆ ಮತ್ತುತರಬೇತಿಯನ್ನು ನೀಡಲಾಗುವುದು. ನ್ಯಾಯಾಲಯದ ಆದೇಶದ ಮೇರೆಗೆ ನಿವಾಸಿಯರನ್ನು ಬಿಡುಗಡೆ ಮಾಡಲಾಗುತ್ತದೆ. ನಿವಾಸಿಯರನ್ನು ಪೋಷಕರು ವಶಕ್ಕೆ ಪಡೆಯಲು ಇಚ್ಚಿಸಿದಲ್ಲಿ ನಿಯಮಾನುಸಾರ ಬಿಡುಗಡೆ ಮಾಡಲಾಗುತ್ತದೆ. ದೀರ್ಘಕಾಲ ಪುನರ್ವಸತಿ ಅಗತ್ಯವಿರುವ ಮಹಿಳೆಯರನ್ನು ರಾಜ್ಯ ಮಹಿಳಾ ನಿಲಯಗಳಿಗೆ ವರ್ಗಾಯಿಸಲಾಗುವುದು. ರಾಜ್ಯದಲ್ಲಿ ಬೆಂಗಳೂರು, ತುಮಕೂರು ಹಾಗೂ ಕಾರವಾರದಲ್ಲಿ ಒಟ್ಟು 3 ಸ್ವೀಕಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಪಾವಧಿ ಪುನರ್ವಸತಿ ಕೇಂದ್ರ (6 ತಿಂಗಳು).

 

ರಾಜ್ಯ ಮಹಿಳಾ ನಿಲಯಗಳು:

 

ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಹಾಗೂ ಅನೈತಿಕ ವ್ಯವಹಾರಗಳ (ತಡೆಗಟ್ಟುವ) ಅಧಿನಿಯಮ 1956ರ ಅಡಿಯಲ್ಲಿ ನ್ಯಾಯಾಲಯದಿಂದ ದಾಖಲಾದ ಪ್ರಕರಣಗಳು ಹಾಗೂ ಬಾಲಕಿಯರ ಬಾಲಮಂದಿರದಲ್ಲಿ 18 ವರ್ಷತುಂಬಿದ ನಿವಾಸಿಯರನ್ನು ದೀರ್ಘಾವಧಿ ಪುನರ್ವಸತಿಗಾಗಿ ದಾಖಲಿಸಿಕೊಳ್ಳಲಾಗುವುದು. ಸಂಸ್ಥೆಯಲ್ಲಿ ನಿವಾಸಿಯರಿಗೆ ಪಾಲನೆ, ಪೋಷಣೆ, ಊಟ, ವಸತಿ, ಬಟ್ಟೆ, ವೈದ್ಯಕೀಯ ಸೌಲಭ್ಯ, ರಕ್ಷಣೆ ಮತ್ತು ತರಬೇತಿಯನ್ನು ನೀಡಲಾಗುವುದು. ಧೀರ್ಘಾವಧಿ ಪುನರ್ವಸತಿ ಕೇಂದ್ರ. ನಿವಾಸಿಯರನ್ನು ಪೋಷಕರು ವಶಕ್ಕೆ ಪಡೆಯಲು ಇಚ್ಚಿಸಿದಲ್ಲಿ ನಿಯಮಾ ನುಸಾರ ಬಿಡುಗಡೆ ಮಾಡಲಾಗುತ್ತದೆ. ಸಂಸ್ಥೆಯಲ್ಲಿರುವ ನಿವಾಸಿಗಳಿಗೆ ಅರ್ಹ ವಿವಾಹ ಪ್ರಸ್ತಾಪವಿದ್ದ ಸಂದರ್ಭದಲ್ಲಿ ವಿವಾಹವನ್ನು ಸಹ ನೆರವೇರಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು ರೂ.20,000ಗಳನ್ನು ನೀಡಲಾಗುತ್ತಿದ್ದು, ರೂ.5,000 ಗಳನ್ನು ಮದುವೆ ಖರ್ಚು ಹಾಗೂ ಉಳಿದರೂ.15,000 ಗಳನ್ನು ನಿವಾಸಿಯ ಹೆಸರಿನಲ್ಲಿ ಠೇವಣಿ ಇಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ 8 ರಾಜ್ಯ ಮಹಿಳಾ ನಿಲಯಗಳು ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ದಾವಣಗೆರೆ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು ಮತ್ತು ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 

                                                                                             

 

ನಿರ್ಗತಿಕ ಮಕ್ಕಳ ಕುಟೀರ ಯೋಜನೆ:

 

ಅನಾಥ ಮತ್ತು ನಿರ್ಗತಿಕ ಮಕ್ಕಳ ಪಾಲನೆ ಹಾಗೂ ಪೋಷಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಕುಟೀರದ ಮಕ್ಕಳಿಗೆ ಊಟ, ವಸತಿ, ಬಟ್ಟೆ, ವೈದ್ಯಕೀಯ ಸೌಲಭ್ಯ, ಮನೋರಂಜನೆ, ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಲಾಗುವುದು. ನಿರ್ಗತಿಕ ಮಕ್ಕಳ ಕುಟೀರಗಳನ್ನು ಸ್ವಯಂ ಸೇವಾ ಸಂಸ್ಥೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲಾ ಪಂಚಾಯತ್ ಕಾರ್ಯಕ್ರಮವಾಗಿದೆ.ಪ್ರತಿ ಕುಟೀರಕ್ಕೆ 25 ಮಕ್ಕಳನ್ನು ದಾಖಲಿಸಿಕೊಳ್ಳಲು ಅವಕಾಶವಿರುತ್ತದೆ. ಈ ಯೋಜನೆಯಡಿ ಪ್ರತಿ ಮಗುವಿಗೆ ಮಾಸಿಕ ನಿರ್ವಹಣಾ ವೆಚ್ಚ ರೂ.1000/-ವನ್ನು ನೀಡಲಾಗುವುದು. ರಾಜ್ಯದಲ್ಲಿ ಯಾದಗಿರಿ,ಉಡುಪಿ ಮತ್ತು ಶಿವಮೊಗ್ಗೆ ಜಿಲ್ಲೆಗಳನ್ನು ಹೊರತುಪಡಿಸಿ 27 ಜಿಲ್ಲೆಗಳಲ್ಲಿ 128 ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಒಟ್ಟು 245 ನಿರ್ಗತಿಕ ಮಕ್ಕಳ ಕುಟೀರಗಳು ಕಾರ್ಯ ನಿರ್ವಹಿಸುತ್ತಿವೆ.

 

ಬೇಟಿ ಬಚಾವೊ ಬೇಟಿ ಪಡಾವೊ:

 

ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮ ಸನ್ಮಾನ್ಯ ಪ್ರಧಾನ ಮಂತ್ರಿಗಳು ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮ (Beti Bachao, Beti Padhao) ಎಂಬ ಹೊಸ ಯೋಜನೆಯನ್ನು 22 ಜನವರಿ 2015 ರಂದು ರಾಷ್ರ್ಟೀಯ ಮಟ್ಟದಲ್ಲಿ ಜಾರಿಗೆ ತಂದಿರುತ್ತಾರೆ. ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಅನುಷ್ಟಾನಗೊಳ್ಳುತ್ತಿದೆ.ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತವನ್ನು(Declining CSR) ಉತ್ತಮ ಪಡಿಸುವುದು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯ ಮುಖ್ಯ ಉದ್ಧೇಶವಾಗಿರುತ್ತದೆ.  ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ಸಹಕಾರದಿಂದ ಅನುಷ್ಠಾನಗೊಳಿಸಲಾಗುತ್ತದೆ. ಈ ಕಾರ್ಯಕ್ರಮದ ಅನುಷ್ಠಾನವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅನುದಾನವು  ಕೇಂದ್ರ ಸರ್ಕಾರದಿಂದ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾಗುತ್ತದೆ.

ಉದ್ದೇಶ :

ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವುದು (Prevent Gender Sex Selective Elimination),ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು(Ensure Survival and Protection of The Girl Child), ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವುದು(Ensure Education of Girl Child)

 

ಇತ್ತೀಚಿನ ನವೀಕರಣ​ : 17-12-2021 04:14 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080